ಮುಖ್ಯ ಸುದ್ದಿ
Vanivilasa Sagara: ವಿವಿ ಸಾಗರ ಭರ್ತಿಗೆ 10 ಅಡಿ ಬಾಕಿ | ಇಂದಿನ ಜಲಾಶಯ ಮಟ್ಟ 120 ಅಡಿ
CHITRADURGA NEWS | 21 SEPTEMBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರದ (Vanivilasa Sagara) ನೀರಿನ ಮಟ್ಟ 120 ಅಡಿಗೆ ತಲುಪಿದ್ದು, ಜಲಾಶಯ ಭರ್ತಿಯಾಗಲು 10 ಅಡಿ ಬಾಕಿಯಿದೆ.
2022 ರಲ್ಲಿ 135 ಅಡಿವರೆಗೆ ನೀರು ಬಂದು ಕೋಡಿ ಬಿದ್ದಿದ್ದ ವಿವಿ ಸಾಗರ, ಆನಂತರದ ವರ್ಷದ ಬರಗಾಲದ ಹಿನ್ನೆಲೆಯಲ್ಲಿ ನೀರಿನ ಹರಿವು ಇರಲಿಲ್ಲ.
ಇದನ್ನೂ ಓದಿ: ದಿನ ಭವಿಷ್ಯ | ಆಸ್ತಿ ವಿವಾದದಲ್ಲಿ ಕಿರಿಕಿರಿ | ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ
ಈ ವರ್ಷದ ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಸುಮಾರು 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು.
ಇದರೊಟ್ಟಿಗೆ ಈಗ ಭದ್ರಾ ಜಲಾಶಯದಿಂದ ಪ್ರತಿ ದಿನ 3 ತಿಂಗಳ ಕಾಲ 700 ಕ್ಯೂಸೆಕ್ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದರಿಂದ ಈಗ ಜಲಾಶಯದ ಮಟ್ಟ 120 ಅಡಿಗೆ ತಲುಪಿದೆ.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಗೆ ಸಂಸದ ಗೋವಿಂದ ಕಾರಜೋಳ ಭೇಟಿ
ಈಗ ಪ್ರತಿ ದಿನ 693 ಕ್ಯೂಸೆಕ್ ನೀರು ಭದ್ರಾ ಜಲಾಶಯದಿಂದ ಹರಿದು ಬರುತ್ತಿದೆ. ಇದರೊಟ್ಟಿಗೆ ಎತ್ತಿನಹೊಳೆ ಯೋಜನೆಯಿಂದಲೂ ಹರಿಸುತ್ತಿರುವ ನೀರು ವಿವಿ ಸಾಗರ ಸೇರಲಿದೆ ಎಂದು ಸರ್ಕಾರ ಹೇಳಿದೆ.
ಎತ್ತಿನಹೊಳೆಯಿಂದ ನೀರು ಹರಿಯುತ್ತಿದ್ದು, ಬರುವ ಮಾರ್ಗದ ಕೆರೆ, ಹಳ್ಳಗಳು ತುಂಬಿದ ನಂತರ ವೇದಾವತಿಗೆ ಸೇರಿ ವಿವಿ ಸಾಗರ ತಲುಪಬೇಕಿದೆ.
130 ಅಡಿ ಎತ್ತರದ ವಿವಿ ಸಾಗರ ಜಲಾಶಯ ಈಗ 120 ಅಡಿವರೆಗೆ ನೀರು ತಲುಪಿದೆ. ಒಟ್ಟು 30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 22.04 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ಭೀಮಸಮುದ್ರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಅಲ್ಪ ಏರಿಕೆ
ಕಳೆದ ವರ್ಷ ಇದೇ ದಿನ ವಿವಿ ಸಾಗರದಲ್ಲಿ 122.70 ಅಡಿ ನೀರಿತ್ತು. ಒಟ್ಟು 24.28 ಟಿಎಂಸಿ ನೀರಿತ್ತು.
ಈ ವರ್ಷ ಕೂಡಾ ಜಲಾಶಯ ಭರ್ತಿಯಾಗುವ ನಿರೀಕ್ಷೆ ಹೊಂದಲಾಗಿತ್ತು. ನಡುವಿನ ಕೆಲ ಮಳೆಗಳು ಕೈ ಕೊಟ್ಟಿವೆ. ಎತ್ತಿನಹೊಳೆ ನೀರು ಎಷ್ಟರ ಪ್ರಮಾಣದಲ್ಲಿ ಜಲಾಶಯ ಸೇರಲಿದೆ ಎನ್ನುವ ಅಂದಾಜು ಸಿಗುತ್ತಿಲ್ಲ.
ಮುಂದಿನ ಮಳೆಗಳು ಚೆನ್ನಾಗಿ ಸುರಿದರೆ ಜಲಾಶಯ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಇನ್ನೂ ಎರಡು ತಿಂಗಳ ಕಾಲ ಭದ್ರಾ ನೀರು ಹರಿದು ಬರಲಿದೆ.
1917ರಲ್ಲಿ ಮೊದಲ ಬಾರಿಗೆ 120 ಅಡಿ ನೀರು ಬಂದಿತ್ತು:
ಜಲಾಶಯ ನಿರ್ಮಾಣವಾದ ನಂತರ ಮೊದಲ ಬಾರಿಗೆ ಅಂದರೆ 1917 ರಲ್ಲಿ ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪಿತ್ತು.
ಆನಂತರದ ವರ್ಷಗಳಲ್ಲಿ ಕ್ರಮೇಣ ಜಾಸ್ತಿಯಾಗುತ್ತಾ, 1920ರಲ್ಲಿ 125 ಅಡಿಗೆ ತಲುಪಿತ್ತು. ಆನಂತರ ಮಳೆ ಕಡಿಮೆಯಾಗಿ ನೀರಿನ ಪ್ರಮಾಣವೂ ಕಡಿಮೆಯಾಗಿತ್ತು.
ಮತ್ತೊಮ್ಮೆ 1932 ರಲ್ಲಿ 125 ಅಡಿಗೆ ಬಂದಿತ್ತು. 1933 ರಲ್ಲಿ ಜಲಾಶಯ ಮೊದಲ ಬಾರಿಗೆ ಭರ್ತಿಯಾಗಿ ನೀರಿನ ಮಟ್ಟ 135.25 ಅಡಿವರೆಗೆ ಬಂದಿತ್ತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಖಾಲಿ ನಿವೇಶನ ಇರೋರಿಗೆ ಮಹತ್ವದ ಸೂಚನೆ
ಆನಂತರ 1956ರಲ್ಲಿ ವಿವಿ ಸಾಗರಕ್ಕೆ 125 ಅಡಿ ನೀರು ಬಂದಿದ್ದು ಬಿಟ್ಟರೆ ನಂತರ ವರ್ಷಗಳಲ್ಲಿ ನಿರಂತರ ಬರಗಾಲಕ್ಕೆ ಸಿಲುಕಿ ಡೆಡ್ ಸ್ಟೋರೇಜ್ ಕೂಡಾ ತಲುಪಿತ್ತು.
ನಂತರ 2000ನೇ ಸಾಲಿನಲ್ಲಿ 122 ಅಡಿ ನೀರು ಬಂದಿತ್ತು. 2022 ರಲ್ಲಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು ಇತಿಹಾಸವಾಗಿದೆ.