ಮುಖ್ಯ ಸುದ್ದಿ
VV sagara: ವಿವಿ ಸಾಗರ ಭರ್ತಿಗೆ 1.20 ಟಿಎಂಸಿ ನೀರಿನ ಅಗತ್ಯ
CHITRADURGA NEWS | 16 NOVEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ನ.16 ಶನಿವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ 300 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಕಳೆದ ವಾರ 900 ರಿಂದ 1 ಸಾವಿರ ಕ್ಯೂಸೆಕ್‍ವರೆಗೆ ಇದ್ದ ಒಳಹರಿವಿನ ಪ್ರಮಾಣ ಈಗ ಕಡಿಮೆಯಾಗಿದೆ.
135 ಅಡಿ ಎತ್ತರದ ವಾಣಿವಿಲಾಸ ಸಾಗರ ಜಲಾಶಯ, 130 ಅಡಿವರೆಗೆ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 15 | ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಜಲಾಶಯ ನಿರ್ಮಾಣವಾದ 120 ವರ್ಷಗಳಲ್ಲಿ ಈವರೆಗೆ ಎರಡು ಬಾರಿ ಮಾತ್ರ ಕೋಡಿ ಬಿದ್ದಿದೆ. 1933 ಹಾಗೂ 2022ರಲ್ಲಿ ಜಲಾಶಯ ಭರ್ತಿಯಾಗಿ ಹರಿದಿದೆ.
ಈಗ 2024ರಲ್ಲಿ ಮತ್ತೊಮ್ಮೆ ಕೋಡಿ ಬೀಳುವ ಎಲ್ಲಾ ಸಾಧ್ಯತೆಗಳು ಇವೆ. ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯಲು ಕೇವಲ ಇನ್ನು 1 ಟಿಎಂಸಿ ಅಡಿ ನೀರು ಬೇಕಾಗಿದೆ.
ಇದನ್ನೂ ಓದಿ: ಎಚ್.ಡಿ.ಪುರ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ | ಮಾಜಿ ಸಚಿವ ಆಂಜನೇಯ ಭಾಗೀ
ನ.16 ಶನಿವಾರದ ಹೊತ್ತಿಗೆ ಜಲಾಶಯದಲ್ಲಿ 128.05 ಅಡಿವರೆಗೆ ನೀರು ಬಂದಿದ್ದು, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ 28.80 ಟಿಎಂಸಿ ಅಡಿ.