ಮುಖ್ಯ ಸುದ್ದಿ
ಚಂದ್ರಯಾನ-3 ಅಲಂಕಾರದಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮೀ | ಕಮಲದ ಹೂವಿನ ಸುಂದರ ಅಲಂಕಾರದಲ್ಲಿ

ಚಂದ್ರಯಾನ-3 ಅಲಂಕಾರದಲ್ಲಿ ಕಂಗೊಳಿಸಿದ ವರಮಹಾಲಕ್ಷ್ಮೀ | ಕಮಲದ ಹೂವಿನ ಸುಂದರ ಅಲಂಕಾರದಲ್ಲಿ ಮನೆಗೆ ಬಂದ ಮಹಾಲಕ್ಷ್ಮೀ.
ಚಿತ್ರದುರ್ಗ ನ್ಯೂಸ್
ವರಮಹಾಲಕ್ಷ್ಮೀ ಹಬ್ಬ ಅಂದಾಕ್ಷಣ ಹೆಣ್ಣು ಮಕ್ಕಳಿಗೆ ವಿಶೇಷ ಆಸಕ್ತಿ, ಕುತೂಹಲ ಹಾಗೂ ಶ್ರದ್ಧಾಭಕ್ತಿ ಮೂಡುತ್ತದೆ. ಈ ವರ್ಷದ ಲಕ್ಷ್ಮೀ ಪ್ರತಿಷ್ಠಾಪನೆ ಹೇಗಿರಬೇಕು, ಯಾರನ್ನೆಲ್ಲಾ ಕರೆದು ಹುಡಿ ತುಂಬಬೇಕು. ಲಕ್ಷೀಗೆ ಉಡಿಸುವ ಸೀರೆ, ಬಳೆ, ರವಿಕೆಗಳು ಯಾವ ಬಣ್ಣದ್ದಿರಬೇಕು ಎಂಬೆಲ್ಲಾ ಲೆಕ್ಕಾಚಾರಗಳು ತಿಂಗಳ ಮೊದಲೇ ಶುರುವಾಗಿರುತ್ತವೆ.
ಅದೇ ರೀತಿಯಲ್ಲಿ ಲಕ್ಷ್ಮೀ ಪ್ರತಿಷ್ಠಾಪನೆಗೆ ಮಡುವ ಅಲಂಕಾರ ಕೂಡಾ ಬಹಳ ಮುಖ್ಯವಾಗಿರುತ್ತದೆ. ಇದರಲ್ಲಿ ಮಹಿಳೆಯರ ನೈಪುಣ್ಯತೆ, ಕೌಶಲ್ಯ ಹಾಗೂ ಅಭಿರುಚಿಗಳು ಮನೆ ಮಾಡಿರುತ್ತವೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ವರಮಹಾಲಕ್ಷ್ಮೀ ಗೆ ಭವ್ಯ ಸ್ವಾಗತ: ಚಿತ್ರದುರ್ಗದ ಅಧಿದೇವತೆಯರಿಗೆ ವೈಭವದ ಅಲಂಕಾರ
ಚಿತ್ರದುರ್ಗ ನಗರದಲ್ಲಿ ಈ ವರ್ಷದ ವರಮಹಾಲಕ್ಷ್ಮೀ ಪ್ರತಿಷ್ಠಾಪನೆಯಲ್ಲಿ ಅತ್ಯಂತ ವಿಶಿಷ್ಟ ಸಂಗತಿಯೊಂದು ಅಲಂಕಾರದಲ್ಲಿ ಬೆಳಕಿಗೆ ಬಂದಿದೆ. ತಾಯಿ ಮಹಾಲಕ್ಷ್ಮೀ ಚಂದ್ರನ ಮೇಲೆ ಕುಳಿತಂತೆ ಅಲಂಕಾರ ಮಾಡಿರುವುದು ಈ ವರ್ಷದ ವಿಶೇಷವಾಗಿದೆ.
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಶ್ರೀಮತಿ ರಾಜೇಶ್ವರಿ ಸಿದ್ಧರಾಮ್ ಅವರ ಮನೆಯಲ್ಲಿ ಚಂದ್ರಯಾನ-3 ಪ್ರತಿನಿಧಿಸಿ ವರಮಹಾಲಕ್ಷ್ಮೀ ಅಲಂಕಾರ ಮಾಡಿದ್ದು, ಅಕ್ಕಪಕ್ಕದ ಮನೆಯವರು ಕುತೂಹಲದಿಂದ ವೀಕ್ಷಿಸಿ ಭಕ್ತಿ ಸಮರ್ಪಣೆ ಮಾಡಿದರು.
ಇನ್ನೂ ಇದೇ ಬಡಾವಣೆಯ 1ನೇ ಕ್ರಾಸ್ ನಿವಾಸಿಗಳಾದ ಹೇಮಾ ರಂಗನಾಥ್ ಅವರ ಸುಂದರವಾದ ಕಮಲದ ಹೂವಿನ ಅಲಂಕಾರದಲ್ಲಿ ಮಹಾಲಕ್ಷ್ಮೀ ತಾಯಿಯನ್ನು ಪ್ರತಿಷ್ಠಾಪಿಸಿದ್ದು, ಎರಡೂ ಅತ್ಯಂತ ಸುಂದರ ದೃಶ್ಯಗಳಾಗಿವೆ.
