ಮುಖ್ಯ ಸುದ್ದಿ
ಶ್ರೀರಾಮನ ಭವ್ಯ ಮೆರವಣಿಗೆ | ನಾಯಕನಹಟ್ಟಿಯಲ್ಲಿ ಮುಸ್ಟೂರು ಶ್ರೀಗಳಿಂದ ಚಾಲನೆ

CHITRADURGA NEWS | 10 JANUARY 2024
ಚಿತ್ರದುರ್ಗ: ಬಹುಕೋಟಿ ಹಿಂದುಗಳ ಆರಾಧ್ಯ ದೈವ ಶ್ರೀರಾಮನ ಭವ್ಯ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಜನವರಿ 22 ರಂದು ಶ್ರೀ ಬಾಲ ರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿ ಮನೆಗೂ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಶ್ರೀರಾಮ ಮಂದಿರ ಕುರಿತ ಮಾಹಿತಿ ಇರುವ ಕರಪತ್ರಗಳನ್ನು ಮನೆ ಮನೆಗೆ ವಿತರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಈ ಸಲ ಅಭ್ಯರ್ಥಿಗೆ ವೆಚ್ಚದ ಮಿತಿ ಎಷ್ಟು ಗೊತ್ತಾ ?
ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಕಾರ್ಯ ಭರದಿಂದ ಸಾಗುತ್ತಿದೆ. ಅನೇಕ ಗ್ರಾಮಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಮನೆಗಳಿಗೆ ಮಂತ್ರಾಕ್ಷತೆ ವಿತರಣೆ ಮಾಡುವ ಮೂಲಕ ಗ್ರಾಮ ಗ್ರಾಮಗಳಲ್ಲೂ ಉತ್ಸಾಹ ಪ್ರದರ್ಶನ ಆಗುತ್ತಿದೆ.
ಬೆನಕನಹಳ್ಳಿಯಲ್ಲಿ ಶ್ರೀರಾಮ ದೇವರ ಮೆರವಣಿಗೆ:
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಶಯದಂತೆ ಲಕ್ಷಾಂತರ ಮಂದಿ ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸುತ್ತಿದ್ದಾರೆ.
ಚಿತ್ರದುರ್ಗ ತಾಲೂಕು ಹಿರೆಗುಂಟನೂರು ಹೋಬಳಿಯ ಬೆನಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಶ್ರೀರಾಮ ದೇವರ ಭವ್ಯ ಮೆರವಣಿಗೆ ನಡೆಸಲಾಯಿತು.
ಗ್ರಾಮಕ್ಕೆ ಸಂಜೆ ಆಗಮಿಸಿದ ಮಂತ್ರಾಕ್ಷತೆಯನ್ನು ಶ್ರೀರಾಮನ ಭವ್ಯ ಪ್ರತಿಮೆಯ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿ: ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು
ಇದೇ ವೇಳೆ ಗ್ರಾಮದ ಮನೆ ಮನೆಗಳಿಗೆ ಅಕ್ಷತೆ, ಕರಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಗ್ರಾಮದ ಮುಖಂಡರು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಿಂಗರಾಜು, ಗ್ರಾಮದ ಮುಖಂಡರಾದ ಗಿರೀಶ್, ಮರಿಸ್ವಾಮಿ, ಶಂಕರಮೂರ್ತಿ, ಶಾಂತಕುಮಾರ್, ಪ್ರಸನ್ನ, ಹರೀಶ್, ನಿಶ್ಚಯ್, ಚೇತನ್, ಸಂದೀಪ್, ಕಿರಣ್, ವಿಜಯ್, ಈಶ್ವರ ಸ್ವಾಮಿ, ಅರುಣ್ ಸೇರಿದಂತೆ ಅನೇಕ ಯುವಕರು, ಗ್ರಾಮಸ್ಥರು ಭಾಗವಹಿಸಿದ್ದರು.

ನಾಯಕನಹಟ್ಟಿಯಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀಗಳಿಂದ ಚಾಲನೆ
ನಾಯಕನಹಟ್ಟಿಯಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀಗಳಿಂದ ಚಾಲನೆ:
ಭಾನುವಾರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ನಾಯಕನಹಟ್ಟಿ ಪಟ್ಟಣದಲ್ಲಿ ವಿತರಣೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಮುಸ್ಟೂರು ಶ್ರೀ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶಿವಚಾರ್ಯ ಸ್ವಾಮೀಜಿ ವಹಿಸಿಕೊಂಡಿದ್ದರು, ಶ್ರೀಗಳು ಕಾರ್ಯಕರ್ತರ ಜೊತೆಗೆ ಕೆಲ ಮನೆಗಳಿಗೆ ಅಕ್ಷತೆಯನ್ನೂ ವಿತರಿಸಿದರು.
ಈ ವೇಳೆ ಸಂಘ ಪರಿವಾರದ ಕಾರ್ಯಕರ್ತರಾದ ನವೀನ್, ಶಂಕರ್, ಮಹಾಂತೇಶ್, ಪ್ರಾಣೇಶ್, ದೇವರಾಜ್, ಎಮ್ಮೆಹಟ್ಟಿ ಸ್ವಾಮಿ, ವೀರೇಶ್ ಸೇರಿದಂತೆ ಅನೇಕರಿದ್ದರು.
